ಪಾಕಿಸ್ತಾನದಲ್ಲಾದ ವಿಮಾನ ಅಪಘಾತದ ಬಗ್ಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಯವರ ಪ್ರತಿಕ್ರಿಯೆ ಏನು
ಹತ್ತಾರು ಜನರ ಸಾವಿಗೆ ಕಾರಣವಾದ ಪಾಕಿಸ್ತಾನದ ಏರ್‌ಬಸ್ ಎ 320 (Airbus a320) ವಿಮಾನ ಪತನದ ನಂತರ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಯವರ ಪ್ರತಿಕ್ರಿಯೆ ಏನಾಗಿತ್ತು ಎಂಬುದರ ಬಗ್ಗೆ ಈ ಸಂಚಿಕೆಯಲ್ಲಿ ತಿಳಿಯೋಣ.
ನಿಮಗೆ ತಿಳಿದ ಹಾಗೆ ಪಾಕಿಸ್ತಾನದ ಲಾಹೋರ್‌ನಿಂದ ಹೊರಟಿದ್ದ ಏರ್‌ಬಸ್ ಎ 320(Airbus a320) ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ವಿಮಾನವು 91 ಪ್ರಯಾಣಿಕರು ಮತ್ತು 8 ಸಿಬ್ಬಂದಿಯೊಂದಿಗೆ ಕರಾಚಿ ವಿಮಾನ ನಿಲ್ದಾಣದ ಬಳಿ ಮಧ್ಯಾಹ್ನ ಜಿನ್ನಾಹ್ ವಿಮಾನ ನಿಲ್ದಾಣದಲ್ಲಿ (Jinnah International Airport) ಇಳಿಯುವ ಒಂದು ನಿಮಿಷ ಮೊದಲು.ಅಪಘಾತಕ್ಕೀಡಾಗಿತ್ತು.
ಇದರಿಂದಾಗಿ ಸಿಬ್ಬಂದಿಗಳು ಸೇರಿ ಒಟ್ಟು 73 ಪ್ರಯಾಣಿಕರು ಮರಣವನ್ನು ಹೊಂದಿದ್ದು ಮೂವರು ಪ್ರಯಾಣಿಕರು ಅಪಘಾತದಿಂದ ಬದುಕುಳಿದಿದ್ದಾರೆ ಎಂದು ತಿಳಿದು ಬಂದಿತ್ತು.
ಈ ಘಟನೆಯ ನಂತರ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಯವರ ಪ್ರತಿಕ್ರಿಯೆ ಟ್ವಿಟ್ಟರ್(Twitter) ನಲ್ಲಿ ಹೀಗಿತ್ತು
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಯವರ ಪ್ರತಿಕ್ರಿಯೆ
"ಪಾಕಿಸ್ತಾನದಲ್ಲಿ ವಿಮಾನ ಅಪಘಾತದಿಂದಾಗಿ ಆದ ಪ್ರಾಣಹಾನಿ ತೀವ್ರವಾಗಿ ದುಃಖಿತವಾಗಿದೆ. ಮೃತರ ಕುಟುಂಬಗಳಿಗೆ ನಮ್ಮ ಸಂತಾಪ, ಮತ್ತು ಗಾಯಗೊಂಡವರಿಗೆ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ"
ConversionConversion EmoticonEmoticon